ಅನ್ನ, ಅಕ್ಷರ ಮತ್ತು ವಸತಿ ಇವು ಯಾವುದೇ ಒಂದು ಕಲ್ಯಾಣ ರಾಜ್ಯದ ಮೂಲಭೂತ ಜವಾಬ್ದಾರಿಗಳು. ಈ ನಿಟ್ಟಿನಲ್ಲಿ, ರಾಜ್ಯದ ವಸತಿರಹಿತ ಬಡ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಗುರುವಾರ. ಅಂಬೇಡ್ಕರ್ ನಿವಾಸ ಯೋಜನೆ ಮತ್ತು ಆಶ್ರಯ ಯೋಜನೆಯಡಿ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವುದು ಹಾಗೂ ಎರಡನೇ ಹಂತದಲ್ಲಿ ಮತ್ತೆ 5 ಲಕ್ಷ ನಿವೇಶನಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿರುವುದು ಬಡವರ ಪಾಲಿಗೆ ಆಶಾಕಿರಣವಾಗಿದೆ.ಸೂರು ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಒಂದು ಕುಟುಂಬದ ಆತ್ಮಗೌರವ, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಸಂಕೇತ.