ನವದೆಹಲಿ: ಕೋಳಿ ಸಾಕಣೆ ಉದ್ಯಮಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದ ಮಾರಕ ಬರ್ಡ್ ಫ್ಲೂ (H5N1 ಹಕ್ಕಿ ಜ್ವರ) ವಿರುದ್ಧ ಭಾರತ ಇದೀಗ ತನ್ನದೇ ಆದ ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಐತ. ಇಷ್ಟು ದಿನ ವಿದೇಶಿ ಲಸಿಕೆಗಳನ್ನೇ ನಂಬಿಕೊಂಡಿದ್ದ ಭಾರತ, ಈಗ ಸ್ವಾವಲಂಬಿಯಾಗಿದೆ. ಭೋಪಾಲ್ನಲ್ಲಿರುವ ICAR-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ಸಂಸ್ಥೆಯ ವಿಜ್ಞಾನಿಗಳು ಈ ಹೊಸ ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಭೋಪಾಲ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಮಹತ್ವದ ಲಸಿಕೆಯನ್ನು ಅಧಿಕೃತವಾಗಿ ದೇಶಕ್ಕೆ ಅರ್ಪಿಸಿದ್ದಾರೆ..