ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಹಳ್ಳಿ ಕಾಫಿ ತೋಟದಲ್ಲಿ ಡ್ರೋನ್ ಮೂಲಕ ಪರಿಶೀಲನೆ ವೇಳೆ 32 ಕಾಡಾನೆಗಳ ಬೃಹತ್ ಹಿಂಡು ಪತ್ತೆಯಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಯಾರಿಗೂ ಯಾವುದೇ ಸಮಸ್ಯೆ ಆಗದಂತೆ ಕಾಡಾನೆ ಓಡಿಸಲು ಎಪಿಸಿಸಿಎಫ್ ಸೂಚಿಸಿದ್ದಾರೆ. ಹಾಸನ, ನವೆಂಬರ್ 20: ಬೇಲೂರು ತಾಲೂಕಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಶೆಟ್ಟಿಹಳ್ಳಿಯ ಕಾಫಿ ತೋಟದಲ್ಲಿ ನಿಂತಿರುವ ಗಜಪಡೆಗಳ ಹಿಂಡು ಕಂಡುಬಂದಿದೆ. ಡ್ರೋನ್ ಮೂಲಕ ಪರಿಶೀಲನೆ ವೇಳೆ 32 ಕಾಡಾನೆಗಳ ಹಿಂಡು ಕಂಡುಬಂದಿದ್ದು, ಅವನ್ನು ಮತ್ತೆ ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಲಾಗಿದೆ.