ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮಾರುಕಟ್ಟೆ ಬಂಡವಾಳದ (Market Cap) ಆಧಾರದಲ್ಲಿ ನಾಸ್ಡಾಕ್ ಮತ್ತು ಹಾಂಕಾಂಗ್ ಎಕ್ಸ್ಚೇಂಜ್ಗಳನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಲಿಸ್ಟೆಡ್ ಸ್ಟಾಕ್ ಎಕ್ಸ್ಚೇಂಜ್ ಆಪರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಿಸ್ಟೆಡ್ ಎಕ್ಸ್ಚೇಂಜ್ ಆಪರೇಟರ್ ಮತ್ತು ಒಟ್ಟಾರೆ ಷೇರುಪೇಟೆಗಳ ನಡುವಿನ ವ್ಯತ್ಯಾಸ ಹಾಗೂ ವಿಶ್ವದ ಪ್ರಮುಖ ಷೇರುಪೇಟೆಗಳ ಪಟ್ಟಿ ಇಲ್ಲಿದೆ. ನವದೆಹಲಿ, ನವೆಂಬರ್ 20: ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE), ತನ್ನ ಸ್ವಂತ ಮಾರುಕಟ್ಟೆ ಬಂಡವಾಳದ (Market Capitalisation) ಆಧಾರದಲ್ಲಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಸ್ಟಾಕ್ ಎಕ್ಸ್ಚೇಂಜ್ ಆಪರೇಟರ್ ಆಗಿ ಹೊರಹೊಮ್ಮಿದೆ.