ಸಂತ ಕಬೀರರ ಜೀವನ ಮತ್ತು ತತ್ವಗಳನ್ನು ಆಧರಿಸಿ ‘ಕಬೀರಾ’ ಎಂಬ ಬೃಹತ್ ಮ್ಯೂಸಿಕಲ್ ಸಿನಿಮಾ ಘೋಷಣೆಯಾಗಿದೆ. ಮಹಾವೀರ್ ಜೈನ್ ನಿರ್ಮಾಣದ ಈ ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸುತ್ತಿದ್ದು, ತನಿಷ್ಕ್ ಬಾಗ್ಚಿ ಸಂಗೀತ ನೀಡಲಿದ್ದಾರೆ. 15ನೇ ಶತಮಾನದ ಕಾಶಿಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ 2027ರಲ್ಲಿ ಸೆಟ್ಟೇರಲಿದೆ. ಭಾರತದ ಶ್ರೇಷ್ಠ ಸಂತ, ಕವಿ ಹಾಗೂ ಸಮಾಜ ಸುಧಾರಕ ಕಬೀರರ ಜೀವನ ಆಧರಿಸಿ ಬೃಹತ್ ಮ್ಯೂಸಿಕಲ್ ಡ್ರಾಮಾ ಸಿನಿಮಾ ಸಿದ್ಧವಾಗುತ್ತಿದೆ. ಮಹಾವೀರ್ ಜೈನ್ ಫಿಲ್ಮ್ಸ್ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಘೋಷಿಸಿದ್ದು, ಇದಕ್ಕೆ 'ಕಬೀರಾ' ಎಂದು ಹೆಸರಿಡಲಾಗಿದೆ.