ಅಪಾರ್ಟ್ಮೆಂಟ್ವೊಂದರಲ್ಲಿ ಮಲತಂದೆಯೊಬ್ಬ ಮಗನನ್ನು ಕೊಂದಿರುವ ಘಟನೆ ಮೂರು ದಿನದ ಬಳಿಕ ಬೆಳಕಿಗೆ ಬಂದಿದೆ. ಹೌದು..ಮಗನನ್ನು ಕೊಂದು, ಪತ್ಮಿ ಮೇಲೆ ಹಲ್ಲೆ ಮಾಡಿ ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದು, ಹೀಗಾಗಿ ತಾಯಿ ಮಗನ ಶವದ ಮುಂದೆ ಮೂರು ದಿನ ನರಳಾಡಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮೂರು ದಿನದ ನಂತರ ಘಟನೆ ಬೆಳಕಿಗೆ ಬಂದಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ. ಬೆಂಗಳೂರು, (ನವೆಂಬರ್ 20): ಮಲತಂದೆಯೊಬ್ಬ ಮಗನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.