ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಡಿಆರ್ಎಸ್ ತೆಗೆದುಕೊಳ್ಳುವಲ್ಲಿ ಮಾಡಿದ ಎಡವಟ್ಟು ತಂಡಕ್ಕೆ ದುಬಾರಿಯಾಗಿದೆ. ಕೆಎಲ್ ರಾಹುಲ್ ವಿಕೆಟ್ ಪಡೆಯುವ ಅವಕಾಶವನ್ನು ನ್ಯೂಜಿಲೆಂಡ್ ಕಳೆದುಕೊಂಡಿತು. ರಿಪ್ಲೇನಲ್ಲಿ ಚೆಂಡು ವಿಕೆಟ್ಗೆ ಬಡಿಯುವುದು ಸ್ಪಷ್ಟವಾಗಿತ್ತು. ಇದು ಬೌಲರ್ಗಳಾದ ಹೆನ್ರಿ ಮತ್ತು ಜೇಮಿಸನ್ಗೆ ತೀವ್ರ ನಿರಾಸೆ ಮೂಡಿಸಿತು. ನ್ಯೂಜಿಲೆಂಡ್ ಈಗಾಗಲೇ ಒಂದು ರಿವ್ಯೂ ಕಳೆದುಕೊಂಡಿದ್ದು, ಆರಂಭಿಕ ಜೊತೆಯಾಟ ದೊಡ್ಡದಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಮಾಡಿದ ಒಂದು ಎಡವಟ್ಟು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ.