ಅಹಮದಾಬಾದ್ನಲ್ಲಿ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ ಫೈನಲ್ನಲ್ಲಿ ರೈಲ್ವೇಸ್ ತಂಡವನ್ನು 3 ರನ್ಗಳಿಂದ ಮಣಿಸಿ ಕರ್ನಾಟಕ ಮಹಿಳಾ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದೆ. ಶುಭಾ ಸತೀಶ್ ಅವರ 48 ರನ್ ಹಾಗೂ ತೇಜಸ್ವಿನಿ ಅವರ 3 ವಿಕೆಟ್ ನೆರವಿನಿಂದ ಕರ್ನಾಟಕ ರೋಚಕ ಗೆಲುವು ಸಾಧಿಸಿತು. ಈ ಪ್ರಶಸ್ತಿ ಕರ್ನಾಟಕ ಮಹಿಳಾ ಕ್ರಿಕೆಟ್ಗೆ ಹೊಸ ಮೈಲುಗಲ್ಲು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಮೈದಾನದಲ್ಲಿ ಶುಕ್ರವಾರ ನಡೆದ ಹಿರಿಯ ಮಹಿಳಾ ಟಿ20 ಟ್ರೋಫಿ ಎಲೈಟ್ ವಿಭಾಗದ ಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು 3 ರನ್ಗಳಿಂದ ಮಣಿಸಿದ ಕರ್ನಾಟಕ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.