ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ನಿಧನರಾದ ತಮ್ಮ ಪಕ್ಷದ ಶಾಸಕ ವಿ.ಎಸ್. ಬಾಬು ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಂತಿಮ ಗೌರವ ಸಲ್ಲಿಸಿದರು. ಚೆನ್ನೈನ ಪೆರಂಬೂರಿನಿಂದ ವಿದ್ಯುತ್ ಚಿತಾಗಾರದವರೆಗೂ ಶವವಾಹನದ ಜೊತೆ ನಡೆದುಕೊಂಡೇ ಸಾಗುವ ಮೂಲಕ ತಮ್ಮ ಆಪ್ತ ಶಾಸಕನಿಗೆ ಭಾವುಕ ವಿದಾಯ ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಶುಕ್ರವಾರ ತಮ್ಮ ಪಕ್ಷದ ಶಾಸಕ ವಿ.ಎಸ್. ಬಾಬು ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಭಾವುಕರಾದರು. ಕೊಲತ್ತೂರು ಕ್ಷೇತ್ರದ ಶಾಸಕರಾಗಿದ್ದ ಬಾಬು ಅವರ ಪಾರ್ಥಿವ ಶರೀರಕ್ಕೆ ವಿಜಯ್ ಸ್ವತಃ ಹೆಗಲು ಕೊಟ್ಟರು.