ರಿಪ್ಪನ್ಪೇಟೆ: ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಕಾಶಮಕ್ಕಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದ ‘ಆತ್ಮಬಲಿ’ ಶಿಲ್ಪ ಮತ್ತು ‘ಎಡಗೈವೀರನ ಮಹಾಸತಿ’ ಶಿಲ್ಪಗಳು ಪತ್ತೆಯಾಗ. ಬಿಳಕಿ ಅವರು ಸ್ಥಳ ಅಧ್ಯಯನ ಮಾಡಿದ್ದಾರೆ.ಮಲೆನಾಡಲ್ಲಿ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳು ಕಂಡುಬರುವುದು ಸಹಜ. ಆದರೆ ಸ್ವಯಂ ಪ್ರಾಣತ್ಯಾಗದ ವಿಶಿಷ್ಟ ಪರಂಪರೆ ಸಾರುವ ಆತ್ಮಬಲಿ ಹಾಗೂ ಎಡಗೈ ಯುದ್ಧ ಪ್ರವೀಣನ ಸ್ಮಾರಕ ಶಿಲ್ಪ ಒಂದೇ ಗ್ರಾಮದಲ್ಲಿ ಲಭ್ಯವಾಗಿರುವುದು ವಿಶೇಷ.ಕರ್ನಾಟಕದ ಮಧ್ಯಕಾಲೀನ ಇತಿಹಾಸದಲ್ಲಿ ಸ್ವಾಮಿಭಕ್ತಿ ಮತ್ತು ಕರ್ತವ್ಯನಿಷ್ಠೆಗಾಗಿ ಪ್ರಾಣತ್ಯಾಗ ಮಾಡುವ ವೇಳವಾಳಿ, ಜೋಳವಾಳಿ, ಗರುಡ ಮುಂತಾದ ಆಚರಣೆಗಳು ಚಾಲ್ತಿಯಲ್ಲಿದ್ದವು.