ಬೆಂಗಳೂರು: ಮಹಿಳೆಯರು ಕೌಶಲ ತರಬೇತಿ ಪಡೆದುಕೊಂಡು ಉದ್ಯಮ ಪ್ರಾರಂಭಿಸಿದಾಗ ಯಶಸ್ಸು ಕಾಣಬಹುದು ಎಂದು ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಹೇಳಿದ್ದಾರೆ.ನಗರದ ಸರ್ ಎಂ. ವಿ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಮತ್ತು ಮಹಿಳಾ ಉದ್ಯಮಿಗಳ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯಾವುದೇ ಉದ್ಯಮ ಪ್ರಾರಂಭಿಸು ಮುಂಚೆ ಎದುರಾಗುವ ಸಮಸ್ಯೆಗಳನ್ನು ನಿಭಾಸುವ ಕೌಶಲ ಇರಬೇಕು ಎಂದು ತಿಳಿಸಿದರು.ಪ್ರತಿ ಸಾಧಕ ಮಹಿಳೆಯ ಬಳಿ ಕತೆ ಇರುತ್ತದೆ. ಮಾಡುವ ಕೆಲಸವನ್ನು ಅರ್ಧಕ್ಕೆ ಬಿಟ್ಟಾಗ ಮಾತ್ರ ಸೋಲಬಹುದು. ಅನಂತರವು ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋದರೆ ಯಶಸ್ಸು ಕಾಣಬಹುದು ಎಂದರು.