ಬೆಂಗಳೂರು : ಜನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ಕೇವಲ ಸಾಂಸ್ಕೃತಿಕ ಸಂಸ್ಥೆಗಳ ಜವಾಬ್ದಾರಿಯಲ್ಲ. ಅದಕ್ಕೆ ಸರ್ಕಾರಗಳೂ ಆದ್ಯತೆ ನೀಡಬೇಕು. ಒಂದು ಸಂಸ್ಕೃತಿಯನ್ನು ಉಳಿ. ಒಂದು ಸಂಸ್ಕೃತಿಯನ್ನು ಉಳಿಸುವುದೆಂದರೆ ನಾಡಿನ ಅಸ್ಮಿತೆಯನ್ನು ಉಳಿಸಿದಂತೆ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ನಾಗೇಗೌಡರು ಜನಪದ ಪರಿಷತ್ತನ್ನು ಕಟ್ಟಿಬೆಳೆಸಲು ತಮ್ಮ ಇಡೀ ಬದುಕು, ಅನುಭವ ಮತ್ತು ಸಂಪನ್ಮೂಲಗಳನ್ನು ಧಾರೆ ಎರೆದಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಜನಪದ ಕ್ಷೇತ್ರದ ಉಳಿವಿಗೆ ತಪಸ್ಸಿನಂತೆ ದುಡಿದಿದ್ದಾರೆ. ಇಂತಹ ಸಾಂಸ್ಕೃತಿಕ ಸಂಸ್ಥೆಗಳಿಗೆ ಸರ್ಕಾರದ ಆರ್ಥಿಕ ನೆರವು ಅತ್ಯಗತ್ಯ.