ಲಖನೌ: ಉತ್ತರ ಪ್ರದೇಶದ ಹಮೀರ್ಪುರದಲ್ಲಿ ವಿದ್ಯುತ್ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಶುಕ್ರವಾರ(ನ. 20) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಚೇರಿಯಲ್ಲಿಯೇ ಕಾರ್ಯನಿರ್ವಾಹಕ ಎಂಜಿನಿಯರ್ ಅನ್. ವಿದ್ಯುತ್ ಪರೀಕ್ಷಾ ವಿಭಾಗದಲ್ಲಿ ನಿಯೋಜಿತರಾಗಿರುವ ಕಾರ್ಯನಿರ್ವಾಹಕ ಎಂಜಿನಿಯರ್, ವಿಧವೆಯಾಗಿರುವ ಮಹಿಳಾ ಉದ್ಯೋಗಿಯನ್ನು ಪದೇ ಪದೇ ತಮ್ಮ ಕಚೇರಿಯ ಕೊಠಡಿಗೆ ಕರೆಸಿಕೊಂಡು, ಅನುಚಿತವಾಗಿ ಮಾತನಾಡುತ್ತಾ, ಅವರನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.ಘಟನೆ ಕುರಿತು ಮಾತನಾಡಿರುವ ಮಹಿಳೆ, ಕೆಲವು ಸಮಯದಿಂದ ತನ್ನನ್ನು ಅನುಚಿತವಾಗಿ ನೋಡುತ್ತಾ, ಯಾವುದೇ ಕೆಲಸವಿಲ್ಲದಿದ್ದರೂ ಕಾರಣವಿಲ್ಲದೆ ತನ್ನ ಕೊಠಡಿಗೆ ಕರೆದು ಕೆಟ್ಟದಾಗಿ ಮಾತನಾಡುತ್ತಿದ್ದರು. ಮತ್ತು ಮೊಬೈಲ್ನಲ್ಲಿ ತನ್ನ ಬಾಡಿಗೆ ವಸತಿಯ ವಿಳಾಸವನ್ನ ಕೇಳಿದ್ದನು ಎಂದು ಹೇಳಿದ್ದಾರೆ..