ಖಾಸಗಿ ಆಸ್ಪತ್ರೆಗಳ ದುಬಾರಿ ಐವಿಎಫ್ ಚಿಕಿತ್ಸೆಯಿಂದ ಮಕ್ಕಳ ಕನಸನ್ನು ಕೈಬಿಡುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳಿಗೆ ಸಿಹಿಸುದ್ದಿ. ಹುಬ್ಬಳ್ಳಿಯ ಕೆಎಂಸಿಯಲ್ಲಿ ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರ ಡಿಸೆಂಬರ್ 5ರಂದು ಉದ್ಘಾಟನೆಯಾಗಲಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹುಬ್ಬಳ್ಳಿ, ನವೆಂಬರ್ 20: ಮಕ್ಕಳು ಬೇಕೆಂಬ ಆಸೆ ಇದ್ದರೂ, ಮಕ್ಕಳಾಗದ ಅನೇಕ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ (IVF) ಚಿಕಿತ್ಸೆಯ ದುಬಾರಿ ವೆಚ್ಚ ಭರಿಸಲಾಗದೆ ಮಕ್ಕಳ ಕನಸನ್ನೇ ಕೈಬಿಡುವ ಪರಿಸ್ಥಿತಿ ಇದೆ.