ಬೆಂಗಳೂರಿನ ಮೇಘನಾ ಫುಡ್ಸ್ಗೆ ಗ್ರಾಹಕರಿಂದ ₹15ರ ಬ್ರಾಂಡೆಡ್ ಕ್ಯಾರಿ ಬ್ಯಾಗ್ಗೆ ಶುಲ್ಕ ವಸೂಲಿ ಮಾಡಿದ ಪ್ರಕರಣದಲ್ಲಿ ಗ್ರಾಹಕ ಆಯೋಗ ₹10,000 ದಂಡ ವಿಧಿಸಿದೆ. ರೆಸ್ಟೋರೆಂಟ್ನ ಹೆಸರು ಮತ್ತು ಲೋಗೋ ಇರುವ ಬ್ಯಾಗ್ಗೆ ಹಣ ಪಡೆಯುವುದು ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಗ್ರಾಹಕರಿಗೆ ಪರಿಹಾರ ನೀಡುವುದರ ಜೊತೆಗೆ ಗ್ರಾಹಕ ಕಾನೂನು ನೆರವು ನಿಧಿಗೆ ದಂಡ ಪಾವತಿಸುವಂತೆ ಆದೇಶಿಸಿದೆ. ಬೆಂಗಳೂರು, ನವೆಂಬರ್ 20: ಹೋಟೆಲ್ಗಳಲ್ಲಿ ಊಟ ಮಾಡಿದರೆ ಅಥವಾ ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡಿದರೆ ಕ್ಯಾರಿ ಬ್ಯಾಗ್ಗೆ ಪ್ರತ್ಯೇಕವಾಗಿ ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ.