ಬಳಸಿದ ಅಡುಗೆ ಎಣ್ಣೆಯನ್ನು ಕಚ್ಚಾ ವಸ್ತುವಾಗಿ ಬಳಸಿ ಭಾರತದಲ್ಲಿ ಸುಸ್ಥಿರ ವಿಮಾನ ಇಂಧನದ (SAF) ಮೊದಲ ಬ್ಯಾಚ್ ಉತ್ಪಾದನೆಯಾಗಿದೆ. ಇಂಡಿಯನ್ ಆಯಿಲ್ನ ಪಾನಿಪತ್ ಘಟಕದಲ್ಲಿ ಈ ಹಸಿರು ಇಂಧನದ ಉತ್ಪಾದನೆಯಾಗುತ್ತಿದೆ. ಇದು ವಾಯುಯಾನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎಸ್ಎಎಫ್ ಎಂದರೇನು, ಅದರ ಅನುಕೂಲ, ಅನಾನುಕೂಲಗಳೇನು ಎನ್ನುವ ವಿವರ ಇಲ್ಲಿದೆ. ನವದೆಹಲಿ, ನವೆಂಬರ್ 20: ನೀವು ಫ್ರೈ ಮಾಡಲು ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಚೆಲ್ಲುವ ಅಗತ್ಯ ಇಲ್ಲ. ಈ ಎಣ್ಣೆಯು ಸುಸ್ಥಿರ ವಿಮಾನ ಇಂಧನವಾಗಿ (Sustainable Aviation Fuel — SAF) ಬಳಕೆ ಮಾಡಲು ಸಾಧ್ಯ. ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಯತ್ನಗಳಾಗುತ್ತಿವೆ.