ಬಸವ ಮಂಟಪ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನ ಆರೋಪದ ಕುರಿತು ವೀರಶೈವ ಮಹಾಸಭಾದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ವಿರುದ್ಧ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡಲಾಗಿದ್ದು, ಅವರನ್ನು ವಜಾಕ್ಕೆ ಆಗ್ರಹಿಸಲಾಗಿದೆ. ಬಿದರಿ ನಡೆ ಸಂಘಟನೆಯ ಘನತೆ ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬೆಂಗಳೂರು, ನವೆಂಬರ್ 20: ರಾಜ್ಯಾದ್ಯಂತ ಲೇಖಕ ರವಿ ಹಂಜ್ ಬರೆದಿರುವ ಬಸವ ಮಂಟಪ ಬುಕ್ ಲಿಂಗಾಯತರನ್ನ ಕೆರಳಿಸಿದೆ. ಪುಸ್ತಕದಲ್ಲಿ ಬಸವಣ್ಣ ಬಗ್ಗೆ ಅಪಮಾನ ಮಾಡಲಾಗಿದೆ ಅಂತಾ ರೊಚ್ಚಿಗೆದ್ದಿದ್ದಾರೆ. ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಪುಟ ಸಮ್ಮತಿ ನೀಡಿದೆ.