ಓದು, ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳುವುದು ಸಹಜ. ಆದರೆ ವರ್ಷಗಳ ಬಳಿಕ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಆಗುವ ಖುಷಿ ಅಷ್ಟಿಷ್ಟಲ್ಲ. ಇದೀಗ ತಾಯಿ ಮಗಳ ಪುನರ್ಮಿಲನದ ವಿಡಿಯೋ ವೈರಲ್ ಆಗಿದೆ. ಒಂದು ವರ್ಷಗಳ ಬಳಿಕ ತಾಯಿ ಮಗಳು ಭೇಟಿಯಾಗಿದ್ದು, ಮಗಳನ್ನು ಕಂಡೊಡನೆ ಹೆತ್ತಮ್ಮ ಕಣ್ಣೀರು ಹಾಕಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ತಂದೆ ತಾಯಿ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ತಮ್ಮ ಮಕ್ಕಳು ಇದ್ದರೂ ಇಲ್ಲದಿದ್ದರೂ ಅಷ್ಟೇ ಪ್ರೀತಿ ತೋರುತ್ತಾರೆ. ಇದೀಗ ಮಗಳನ್ನು ಕಂಡೊಡನೆ ತಾಯಿ (mother) ಕಣ್ಣು ಒದ್ದೆಯಾಗಿದೆ. ಒಂದು ವರ್ಷಗಳ ಬಳಿಕ ತಾಯಿ ಮಗಳು ಪರಸ್ಪರ ಭೇಟಿಯಾಗಿದ್ದಾರೆ.