ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ನಟಿ ಯಾಮಿ ಗೌತಮ್ ಪರಸ್ಪರ ಹಾಡಿ ಹೊಗಳಿದ್ದಾರೆ. ಯಾಮಿ ನನ್ನ ಬದುಕಿನ ಅದೃಷ್ಟದ ದೇವತೆ ಎಂದಿರುವ ಆದಿತ್ಯ, ತಾವು ರಾತ್ರೋರಾತ್ರಿ ಸ್ಟಾರ್ ಆಗಲು 20 ವರ್ಷಗಳ ಕಠಿಣ ಶ್ರಮವಿದೆ ಎಂದು ತಮ್ಮ ಸಿನಿಮಾ ಪಯಣವನ್ನು ಸ್ಮರಿಸಿಕೊಂಡಿದ್ದಾರೆ. ಬಾಲಿವುಡ್ನ ಜನಪ್ರಿಯ ಜೋಡಿ ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭ ಒಂದರಲ್ಲಿ ಇವರಿಬ್ಬರು ಗೌರವಕ್ಕೆ ಪಾತ್ರರಾದರು. ಈ ವೇಳೆ ವೇದಿಕೆಯ ಮೇಲೆ ಪರಸ್ಪರರ ವೃತ್ತಿಜೀವನ ಮತ್ತು ಬದುಕಿನ ಪಯಣದ ಕುರಿತು ಮನಬಿಚ್ಚಿ ಮಾತನಾಡಿದರು.