ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2026-27 ರಲ್ಲಿ ಉತ್ತರ ಪ್ರದೇಶ ತಂಡ ಚಂಡೀಗಢ ವಿರುದ್ಧ 30 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಯುಪಿ ತಂಡದ ಎರಡನೇ ಜಯವಾಗಿದೆ. ಆರ್ಯನ್ ಜುಯಾಲ್ ಅವರ ಅಜೇಯ 64 ರನ್ ಹಾಗೂ ಭುವನೇಶ್ವರ್ ಕುಮಾರ್ ಅವರ 3 ವಿಕೆಟ್ ಗಳ ಅಮೋಘ ಬೌಲಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಕರಣ್ ಶರ್ಮಾ ನಾಯಕತ್ವದ ಯುಪಿ ಭರ್ಜರಿ ಪ್ರದರ್ಶನ ನೀಡಿದೆ.