ಮಾಸ್ಕೊ : ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ತ್ರಿಪಕ್ಷೀಯ ಶೃಂಗಸಭೆಯನ್ನು ನಡೆಸಲು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು... ಈ ನಡೆಯು ಮಾಸ್ಕೋದ ರಾಜತಾಂತ್ರಿಕ ಸ್ಥಾನಮಾನವನ್ನು ಬಲಪಡಿಸಬಹುದಲ್ಲದೆ, ತನ್ನದೇ ಭವಿಷ್ಯದ ಕುರಿತಾದ ಮಾತುಕತೆಗಳಿಂದ ಉಕ್ರೇನ್ ಅನ್ನು ಹೊರಗಿಡಲಾಗುತ್ತಿದೆ ಎಂಬ ಕಳವಳವನ್ನು ಹೆಚ್ಚಿಸಿದೆ.`ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಅಕ್ಟೋಬರ್ 9 ರಂದು ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಪುಟಿನ್ ಈ ಪ್ರಸ್ತಾಪವನ್ನು ಮಂಡಿಸಿದ್ದಾರೆ.