ಚೆನ್ನೈ: ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಆದರೂ, ನವೆ. ಆದರೂ, ನವೆಂಬರ್ 24 ರಂದು ನಡೆಯಲಿರುವ ದೀಪೋತ್ಸವಕ್ಕೆ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಸರ್ವೋಚ್ಛ ನ್ಯಾಯಾಲಯ ವಿಶೇಷ ಅನುಮತಿ ನೀಡಿದೆ.ಈ ಮಧ್ಯಂತರ ಅನುಮತಿಯನ್ನು ಸಂಪ್ರದಾಯದ ಅಂತಿಮ ಮಾನ್ಯತೆ ಎಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಇದಷ್ಟೇ ಅಲ್ಲದೆ, ಈ ಆದೇಶದ ಆಧಾರದ ಮೇಲೆ ಬೆಟ್ಟದ ಮೇಲೆ ಪ್ರವೇಶಿಸುವ, ಸ್ವಾಧೀನಪಡಿಸಿಕೊಳ್ಳುವ ಅಥವಾ ನಿಯಂತ್ರಣ ಸಾಧಿಸುವ ಯಾವುದೇ ಹೆಚ್ಚುವರಿ ಹಕ್ಕುಗಳನ್ನು ಕೇಳುವಂತಿಲ್ಲ ಎಂದು ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.ಷರತ್ತುಗಳು ಹೀಗಿವೆ!