ಚನ್ನಪಟ್ಟಣ: ಕಳೆದ ಉಪಚುನಾವಣೆ ಬಳಿಕ ಕ್ಷೇತ್ರದಲ್ಲಿ ತುಸು ತಣ್ಣಗಾಗಿದ್ದ ರಾಜಕೀಯ ವಾತಾವರಣ ಇದೀಗ ಮತ್ತೆ ಕಾವೇರತೊಡಗಿದೆ. ಜಿಪಂ ಹಾಗೂ ತಾಪಂ ಚುನಾವಣೆಗಳ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ಮ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ವಾಕ್ಸಮರ ಈಗ ನಾಯಕರ ನಿವಾಸಗಳು ಮತ್ತು ಪಕ್ಷದ ಕಚೇರಿಗಳ ಗೋಡೆಗಳಿಗೂ ವ್ಯಾಪಿಸಿದೆ. ಹಾಗೆಯೇ ಇಬ್ಬರು ನಾಯಕರ ವಾಗ್ವಾದವು ವೈಯಕ್ತಿಕ ನಿಂದನೆ, ಬೆದರಿಕೆಯ ಭಾಷೆ, ಆಧಾರರಹಿತ ಆರೋಪ ಮತ್ತು ರಾಜಕೀಯ ದ್ವೇಷದ ಪ್ರದರ್ಶನವಾಗಿ ಬದಲಾಗಿದೆ.