ಮೈಸೂರು: ಸುಸ್ಥಿರ ಕೃಷಿ ಮತ್ತು ಜೀವವೈವಿಧ್ಯ ಸಂರಕ್ಷಣೆ ಕೇವಲ ಶೈಕ್ಷಣಿಕ ಚರ್ಚೆಯ ವಿಷಯಗಳಲ್ಲ. ಅವು ಇಂದಿನ ತುರ್ತು ಅಗತ್ಯವಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾ. ಎನ್.ಕೆ.ಲೋಕನಾಥ್ ಹೇಳಿದರು.ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಮೈವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಸ್ಯ ಜೀವಶಾಸ್ತ್ರದಲ್ಲಿ ಹೊಸ ಆಯಾಮಗಳು’ ವಿಷಯಾಧಾರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು. ಮನುಕುಲದ ಉಳಿವು, ಆರ್ಥಿಕತೆ ಮತ್ತು ಆರೋಗ್ಯ ಎಲ್ಲವೂ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇವೆ ಮತ್ತು ಪುನರುಜ್ಜೀವನಗೊಳಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿವೆ. ಹವಾಮಾನ ಬದಲಾವಣೆ, ಆವಾಸಸ್ಥಾನಗಳ ನಾಶ, ಮಣ್ಣಿನ ಗುಣಮಟ್ಟದ ಕುಸಿತ, ಜೀವವೈವಿಧ್ಯತೆಯ ಇಳಿಮುಖದಂತಹ ಸವಾಲುಗಳು ಎದುರಾಗಿವೆ.