ಮಾಗಡಿ: ಕನಕಪುರದಲ್ಲಿರುವ ನ್ಯಾಯಾಲಯ ಮಾದರಿಯಲ್ಲೇ ಪಟ್ಟಣದ ಸಮೀಪವೇ 4 ಎಕರೆ ವಿಸ್ತೀರ್ಣದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಿ. ಬಾಲಕೃಷ್ಣ ತಿಳಿಸಿದರು.ಪಟ್ಟಣದ ವಕೀಲರ ಕಚೇರಿಯಲ್ಲಿ ಬುಧವಾರ ಸನ್ಮಾನ ಸ್ವೀಕರಿ ಮಾತನಾಡಿ, ಸೋಲೂರು ಹೋಬಳಿ ನ್ಯಾಯಾಂಗ ವ್ಯಾಪ್ತಿಯನ್ನು ವಾಗಡಿ ನ್ಯಾಯಾಲಯಕ್ಕೆ ಸೇರಿಸಲು, ವಾಗಡಿಯಲ್ಲಿ ಲಾ ಯುನಿವರ್ಸಿಟಿ ಆರಂಭಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಮಯ ನಿಗದಿ ಮಾಡಲಾಗುತ್ತಿದ್ದು, ವಕೀಲರ ನಿಯೋಗ ಬಂದರೆ ಅನುಕೂಲವಾಗಲಿದೆ ಎಂದರು.ಪ್ರಸ್ತುತ ನ್ಯಾಯಾಲಯ ಕಟ್ಟಡಕ್ಕೆ ಪುರಸಭೆಯಿಂದ ನಿವೇಶನ ನೀಡಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಜಾಗ ಗುರುತಿಸಿ, 5 ಕೋಟಿ ರೂ.