ಮಾಗಡಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗಿ 3 ವರ್ಷ ಆಗಿದೆ, ಸುಮ್ಮನೆ ಕಥೆ ಹೇಳಿಕೊಂಡು ಓಡಾಡಿದರೆ ಪ್ರಯೋಜನವಿಲ್ಲ. ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡಿಸಲಿಲ್ಲ, ಒಂದು ಕೈಗಾರಿಕೆ ಪ್ರದೇಶ ಮಾಡಲಿಲ್. ಮಾಗಡಿ ತಾಲೂಕಿನಲ್ಲಿ 150 ಎಕರೆ ಜಾಗ ನೀಡುತ್ತೇನೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ಕಾರ್ಖಾನೆ ನಿರ್ಮಿಸಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕೇಂದ್ರದಿಂದ ಸಾಮಾಜಿಕ ನ್ಯಾಯಕೊಡಲಿ. ಎಲ್ಲರಿಗೂ ಬರೀ ಚಾಕ್ಲೇಟ್ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ವಿರೋಧ ಪಕ್ಷದವರು ನಮ್ಮ ಸರ್ಕಾರ, ನಾವು ನಮ್ಮ ಸರ್ಕಾರ ಬರುತ್ತದೆ ಎನ್ನುತ್ತೇವೆ. ಕಬ್ಬು ಬೆಳೆಗಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರದಿಂದ ಸಹಕಾರ ಮಾಡಲಿ.