Astronomy : ಬಾಹ್ಯಾಕಾಶದಲ್ಲಿ ಸಂಚರಿಸುವ ಬೃಹತ್ ಕ್ಷುದ್ರಗ್ರಹವೊಂದು ಮುಂದಿನ ವರ್ಷ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗಲಿದೆ. 1999 AN10 ಎಂದು ಹೆಸರಿಸಲಾಗಿರುವ ಈ ಆಕಾಶಕಾಯ 2027ರ ಆಗಸ್ಟ್. 1999 AN10 ಎಂದು ಹೆಸರಿಸಲಾಗಿರುವ ಈ ಆಕಾಶಕಾಯ 2027ರ ಆಗಸ್ಟ್ 7ರಂದು ಭೂಮಿಯ ಸಮೀಪಕ್ಕೆ ಬರಲಿದೆ. ವಿಶೇಷವೆಂದರೆ, ಈ ಕ್ಷುದ್ರಗ್ರಹ ಹಾದುಹೋಗುವ ಅಂತರ ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ದೂರಕ್ಕೆ ಬಹುತೇಕ ಸಮೀಪದಲ್ಲಿರಲಿದೆ. ಈ ಅಪರೂಪದ ಖಗೋಳ ಘಟನೆಯ ಬಗ್ಗೆ ವಿಜ್ಞಾನಿಗಳು ಈಗಾಗಲೇ ಗಮನ ಹರಿಸಿದ್ದಾರೆ.ಚಂದ್ರನಷ್ಟೇ ದೂರದಲ್ಲಿ ಹಾದುಹೋಗಲಿದೆಖಗೋಳಶಾಸ್ತ್ರಜ್ಞರ ಪ್ರಕಾರ, 1999 AN10 ಅಪೊಲೊ ವರ್ಗಕ್ಕೆ ಸೇರಿದ ಕ್ಷುದ್ರಗ್ರಹವಾಗಿದೆ. ಇದು ಸುಮಾರು 1.76 ವರ್ಷಗಳಿಗೊಮ್ಮೆ ಸೂರ್ಯನನ್ನು ಸುತ್ತುತ್ತದೆ.