ಕೋಲಾರ: ಯಾವುದೇ ಪಕ್ಷದ ಕಾರ್ಯಕರ್ತರಿಗೆ ಅಥವಾ ಮುಖಂಡರಿಗೆ ಮೈನಿಂಗ್ ಪರವಾನಗಿ ಕೊಡಬೇಕು ಎಂಬ ನಿಯಮವಿಲ್ಲ. ಪಾರಂಪರಿಕವಾಗಿ ವೃತ್ತಿ ಮಾಡುತ್ತಿರುವ ನೈಜ ಕಲ್ಲು ಕುಟಿಕರು ಯಾರಿದ್ದಾರೋ ಅವರಿಗೆ ಮಾತ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಲ್ಲು ಕುಟಿಕರ ಸಮಸ್ಯೆಗಳ ಕುರಿತು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ರಾಜಕೀಯ ಒತ್ತಡಗಳಿಗೆ ಮಣಿಯದೆ ಅರ್ಹರಿಗೆ ಮಾತ್ರ ನ್ಯಾಯ ಒದಗಿಸುವಂತೆ ತಾಕೀತು ಮಾಡಿದರು. ಕೆಲವು ಅನರ್ಹರು ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ತಾವು ಕಟ್ಟಾ ತಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಡಿಸಿ ವಿರುದ್ಧ ದೂರು ನೀಡಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.