Cyclone Akvan began landfall near Odisha-Andhra coast today, bringing heavy rain in East India and dense fog north. IMD Weather Forecast: ದೇಶದ ಹವಾಮಾನದಲ್ಲಿ ಇಂದು (ನವೆಂಬರ್ 20) ಎರಡು ರೀತಿಯ ಬದಲಾವಣೆ ಕಾಣಬಹುದಾಗಿದೆ. ಪೂರ್ವ ಕರಾವಳಿಯಲ್ಲಿ ಅಕ್ವಾನ್ (Cyclonic Storm Akvan) ಚಂಡಮಾರುತವು ಆರ್ಭಟ ಜೋರಾಗಿದ್ದು, ಭೂಮಿಯತ್ತ ಆಗಮಿಸುತ್ತಿದೆ. ಇತ್ತ ಉತ್ತರ ಭಾರತದಾದ್ಯಂತ ಮೈಕೊರೆವ ಚಳಿ ವ್ಯಾಪಿಸಿದೆ. ಕಳೆದೊಂದು ತಿಂಗಳಲ್ಲಿ ಅಪ್ಪಳಿಸುತ್ತಿರುವ ಮೂರನೇ ಚಂಡಮಾರುತ ಇದಾಗಿದ್ದು, ಅದರ ಪ್ರಭಾವದಿಂದ ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ ಸೇರಿ ಕರಾವಳಿ ಭಾಗದಲ್ಲಿ ಜೋರು ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ತಿಳಿಸಿದೆ.