ಅನನ್ಯಾ ಪಾಂಡೆ, ತಮ್ಮ ಸಾಧಾರಣ ನಟನೆ, ವಿದೇಶಿ ಆಕ್ಸೆಂಟ್ ಭರಿತ ಸಂಭಾಷಣೆ ಹೇಳುವ ಶೈಲಿ, ಪದೇ ಪದೇ ಬಾಯ್ಫ್ರೆಂಡ್ ಬದಲಾವಣೆ ಮಾಡುವುದು ಇನ್ನಿತರೆ ಕಾರಣಗಳಿಗಾಗಿ ಪದೇ ಪದೇ ಟ್ರೋಲ್ ಆಗುತ್ತಲೇ ಇರುವ ಅನನ್ಯಾ ಪಾಂಡೆ. ಇದೀಗ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದು, ತಾವು ಮತ್ತೊಮ್ಮೆ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ. ಆ ಮೂಲಕ ತಮ್ಮ ವಿದೇಶಿ ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.