ಚಿಕಾಗೋದಲ್ಲಿ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ನಿಲ್ಲಿಸುವಂತೆ ಸ್ಪಷ್ಟ ಸಂದೇಶ ನೀಡಿದರು, ಆಗ ಮಾತ್ರ ಮಾತುಕತೆ ಸಾಧ್ಯ ಎಂದರು. ಭಾರತದ ವಿದೇಶಾಂಗ ನೀತಿ ಇಸ್ರೇಲ್, ಗಾಜಾ, ಅಮೆರಿಕ-ಇರಾನ್ ಸಂಬಂಧಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿ ಆಧರಿಸಿರಬೇಕು ಎಂದರು. ಚುನಾವಣಾ ವ್ಯವಸ್ಥೆಯಲ್ಲಿ ಲೋಪಗಳಿದ್ದರೂ, ಕಾಂಗ್ರೆಸ್ ಚುನಾವಣೆ ಬಹಿಷ್ಕರಿಸದೆ ಹೋರಾಟ ಮುಂದುವರಿಸಲಿದೆ ಎಂದು ಪ್ರತಿಪಾದಿಸಿದರು. ಭಾರತ ಜಾಗತಿಕವಾಗಿ ತನ್ನ ಧ್ವನಿ ಪರಿಣಾಮಕಾರಿಯಾಗಿ ಕೇಳಿಸಬೇಕು. ಚಿಕಾಗೋ, ನವೆಂಬರ್ 20: ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.