ಇತ್ತೀಚೆಗೆ ನಟಿ ರಾಧಿಕಾ ಆಪ್ಟೆ, ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಸಾಕಷ್ಟು ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದು, ದಕ್ಷಿಣ ಭಾರತ ಚಿತ್ರರಂಗ ಕೆಟ್ಟದ್ದು ಎಂಬ ಭಾವನೆ ಬಿತ್ತುವ ಪ್ರಯತ್ನ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹಲವು ನಟಿಯರು ಮಾತನಾಡುತ್ತಿದ್ದಾರೆ. ಇದೀಗ ನಟಿ ಸಮೀರಾ ರೆಡ್ಡಿ ಬಾಲಿವುಡ್ಗಿಂತಲೂ ದಕ್ಷಿಣ ಭಾರತ ಚಿತ್ರರಂಗ ಉತ್ತಮ ಎಂದಿದ್ದಾರೆ. ಸಮೀರಾ ರೆಡ್ಡಿ ಮೂಲತಃ ಬಾಲಿವುಡ್ ನಟಿ, ಹುಟ್ಟಿದ್ದು ಮುಂಬೈನಲ್ಲಿ ಆದರೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ. ಕಳೆದ ಕೆಲವಾರು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿರುವ ಸಮೀರಾ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ.