ಹಿಂದೂ ಧರ್ಮದಲ್ಲಿ ತುಳಸಿ ಎಲೆಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶ್ರೀಮಹಾವಿಷ್ಣುವಿನ ಪೂಜೆಯಲ್ಲಿ ತುಳಸಿ ದಳವನ್ನು ಕಡ್ಡಾಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹಾಗಾದರೆ ವಿಷ್ಣುವಿಗೆ ತುಳಸಿ ಎಂದರೆ ಏಕೆ ಅಚ್ಚುಮೆಚ್ಚು? ವೃಂದಾ ದೇವಿಯ ಪೌರಾಣಿಕ ಕಥೆ, ತುಳಸಿ ಪೂಜೆಯ ಮಹತ್ವ ಮತ್ತು ಎಲೆಗಳನ್ನು ಕೀಳುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಅದರಲ್ಲೂ ಶ್ರೀಮಹಾವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆಗಳಿಗೆ ವಿಶೇಷ ಮಹತ್ವವಿದೆ. ವಿಷ್ಣುವಿಗೆ ಎಷ್ಟೇ ಬೆಲೆಬಾಳುವ ಹೂವು, ಹಣ್ಣು, ಆಭರಣಗಳನ್ನು ಅರ್ಪಿಸಿದರೂ ತುಳಸಿ ದಳವಿಲ್ಲದ ಪೂಜೆ ಅಪೂರ್ಣ ಎಂಬ ಧಾರ್ಮಿಕ ನಂಬಿಕೆಯಿದೆ.