ರಿಯಾದ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತೆ ದಟ್ಟವಾಗುತ್ತಿದ್ದು, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಗುರುವಾರ (ನ.19) ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇಡೀ ನಗರವೇ ಬೆಚ. ಯೆಮೆನ್ನ ಇರಾನ್ ಬೆಂಬಲಿತ ಹೂತಿ ಬಂಡುಕೋರರು ನಡೆಸಿದ ಈ ದಾಳಿಯಲ್ಲಿ ರಿಯಾದ್ನ ಅತಿ ಎತ್ತರದ ಗಗನಚುಂಬಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸೌದಿ ಅರೇಬಿಯಾ ದೃಢಪಡಿಸಿದೆ.80 ಅಂತಸ್ತಿನ ಟವರ್ಗೆ ಹಾನಿ!ರಿಯಾದ್ನಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸೌದಿ ನಾಗರಿಕ ರಕ್ಷಣಾ ಸಂಸ್ಥೆ ಎಕ್ಸ್ನಲ್ಲಿ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದೆ. ದಾಳಿಯಿಂದ ಕಟ್ಟಡಕ್ಕೆ ಭೌತಿಕ ಹಾನಿಯಾಗಿದೆಯಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.