ಶ್ರೀನಗರ: ದಶಕಗಳಿಂದ ಭಯೋತ್ಪಾದನೆಯ ನೆರಳಿನಲ್ಲಿದ್ದ ಕಾಶ್ಮೀರ ಕಣಿವೆ ಈಗ ಸಂಪೂರ್ಣವಾಗಿ 'ಸ್ಥಳೀಯ ಉಗ್ರರಿಂದ ಮುಕ್ತವಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ನ.19) ಅಧಿಕೃತವಾಗಿ ಘ. ಇತ್ತೀಚೆಗೆ ಕುಲ್ಗಾಮ್ನಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ (LeT) ಉಗ್ರ ಲತೀಫ್ ಭಟ್ನನ್ನು ಹೊಡೆದುರುಳಿಸಿದ ಬೆನ್ನಲ್ಲೇ ಈ ಮಹತ್ವದ ಸುದ್ದಿ ಹೊರಬಿದ್ದಿದೆ.ಕೊನೆಯ ಸ್ಥಳೀಯ ಉಗ್ರನೂ ಖತಂ!ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಈ ವಿಚಾರವನ್ನು ಬಹಿರಂಗಪಡಿಸಿದರು. .ಬುಧವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು 15 ಲಕ್ಷ ರೂಪಾಯಿ ಬಹುಮಾನ ಘೋಷಿತ ಉಗ್ರ ಲತೀಫ್ ಭಟ್ನನ್ನು ಗುಂಡಿಕ್ಕಿ ಕೊಂದಿಹಾಕಿದ್ದಾರೆ.