ಅರ್ಜುನ ಸರ್ಜಾ ಅವರು ತಮ್ಮ ಕಿರಿಯ ಪುತ್ರಿಯನ್ನು ವಿದೇಶಿ ವರನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಆದರೆ ಅದೆಲ್ಲ ಕಳೆದು ಕೆಲವೇ ದಿನಗಳಲ್ಲಿ ಇದೀಗ ಅರ್ಜುನ್ ಸರ್ಜಾ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ತಮ್ಮ ಹಿರಿಯ ಪುತ್ರಿ ಮತ್ತು ಅವರ ಪತಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದು, ತಮ್ಮ ಹಿರಿಯ ಮಗಳು, ನಟಿ ಐಶ್ವರ್ಯ ಅರ್ಜುನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹರಡಿರುವ ಆಧಾರರಹಿತ ಹಾಗೂ ಅವಹೇಳನಕಾರಿ ಆರೋಪಗಳನ್ನು ಖಂಡಿಸಿದ್ದಾರೆ.