‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಕಠಿಣ ಸಮಯ ಎದುರಾಗಿತ್ತು ಎಂದು ಹೇಳುವ ಮೂಲಕ ಹಿಮಾಚಲ ಪ್ರದೇಶದ ಸಚಿವ ಜಗತ್ ಸಿಂಗ್ ನೇಗಿ ವಿಧಾನಸಭೆಯಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಇಂದು ಅಧಿವೇಶನದಲ್ಲಿ ಮಾತನಾಡಿದ ನೇಗಿ, ಡಸಾಲ್ಟ್ ಏವಿಯೇಷನ್ನ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಪ್ರತಿ ವಿಮಾನಕ್ಕೆ 700 ಕೋಟಿ ರೂ. ಬದಲಾಗಿ ಭಾರತ 2,300 ಕೋಟಿ ರೂ. ಪಾವತಿಸಿದೆ ಎಂದು ಆರೋಪಿಸಿದ ಅವರು, "ಆ ಯುದ್ಧ ವಿಮಾನಗಳು ನಿಷ್ಪ್ರಯೋಜಕವೆಂದು ಸಾಬೀತಾದವು. ಇದರ ಪರಿಣಾಮವಾಗಿ ಭಾರತವು ಪಾಕಿಸ್ತಾನವನ್ನು ಎದುರಿಸಲು ಕಠಿಣ ಸಮಯವನ್ನು ಎದುರಿಸಬೇಕಾಯಿತು" ಎಂದು ಹೇಳಿದ್ದಾರೆ.