ಮೆಗ್ನೀಸಿಯಮ್ ದೇಹದ ಸ್ನಾಯುಗಳು, ನರಗಳು ಮತ್ತು ಶಕ್ತಿಯ ಉತ್ಪಾದನೆಗೆ ಅಗತ್ಯವಾದ ಖನಿಜವಾಗಿದೆ. ಇದರ ಕೊರತೆಯಿಂದ ಕೆಲವರಿಗೆ ಸ್ನಾಯು ಸೆಳೆತ, ಸುಸ್ತು ಮತ್ತು ನಿದ್ರೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಾಳೆಹಣ್ಣು, ಕುಂಬಳಕಾಯಿ ಬೀಜ, ಬಾದಾಮಿ, ಪಾಲಕ್ ಮತ್ತು ಹರಿವೆ ಮುಂತಾದ ಆಹಾರಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೆಗ್ನೀಸಿಯಮ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಸಹಾಯವಾಗುತ್ತದೆ. ಆಗಾಗ ಸುಸ್ತು, ಸ್ನಾಯು ಸೆಳೆತ, ನಿದ್ರೆಯ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯೂ ಒಂದು ಕಾರಣವಾಗಿರಬಹುದು. ಅದರಲ್ಲೂ ಮೆಗ್ನೀಸಿಯಮ್ ನಮ್ಮ ದೇಹದ ಸ್ನಾಯುಗಳು, ನರಗಳ ಕಾರ್ಯನಿರ್ವಹಣೆ, ಶಕ್ತಿಯ ಉತ್ಪಾದನೆ ಮತ್ತು ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಖನಿಜವಾಗಿದೆ.