ತುಮಕೂರು ನಗರದ ಮಂಡಿಪೇಟೆ ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆಯಿಂದ ಬೇಸತ್ತ ಎಂಟನೇ ತರಗತಿಯ ಪುಟ್ಟ ವಿದ್ಯಾರ್ಥಿನಿ ರಸ್ತೆ ದುರಸ್ತಿ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ. ಹಲವು ಬಾರಿ ಸೈಕಲ್ನಿಂದ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ತುಮಕೂರು, ನವೆಂಬರ್ 19: ಸಾಮಾನ್ಯವಾಗಿ ರಸ್ತೆ ಗುಂಡಿಗಳಿಂದ ಜನಸಾಮಾನ್ಯರು ಬೇಸತ್ತು ಅಧಿಕಾರಿಗಳಿಗೆ ದೂರು ನೀಡುವುದನ್ನು ನೋಡಿದ್ದೇವೆ. ಆದರೆ ರಸ್ತೆ ಗುಂಡಿಗಳ ಸಮಸ್ಯೆ ಪರಿಹರಿಸುವಂತೆ 8ನೇ ತರಗತಿಯ ಪುಟ್ಟ ವಿದ್ಯಾರ್ಥಿನಿ ಪಾಲಿಕೆಗೆ ಪತ್ರ ಬರೆದಿದ್ದಾಳೆ.