ಪುರುಷರ ವಯಸ್ಸು ಹೆಚ್ಚಾದಂತೆ ದೇಹದ ಪೌಷ್ಟಿಕಾಂಶಗಳ ಅಗತ್ಯವೂ ಬದಲಾಗುತ್ತದೆ. 20 ಮತ್ತು 30ರ ವಯಸ್ಸಿನಲ್ಲಿ ಪ್ರೋಟೀನ್, ಹಣ್ಣು, ತರಕಾರಿಗಳಿಗೆ ಆದ್ಯತೆ ನೀಡಬೇಕು. 40ರ ನಂತರ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. 50 ಮತ್ತು 60ರ ವಯಸ್ಸಿನಲ್ಲಿ ಸ್ನಾಯುಗಳ ಬಲ ಕಾಪಾಡಲು ಪ್ರೋಟೀನ್ ಸಮೃದ್ಧ ಆಹಾರ, ಆರೋಗ್ಯಕರ ಕೊಬ್ಬು, ವಿಟಮಿನ್ ಹಾಗೂ ಖನಿಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯ. ವಯಸ್ಸು ಹೆಚ್ಚಾದಂತೆ ದೇಹದ ಕಾರ್ಯನಿರ್ವಹಣೆ, ಚಯಾಪಚಯ ಕ್ರಿಯೆ, ಸ್ನಾಯುಗಳ ಬಲ ಮತ್ತು ಹಾರ್ಮೋನುಗಳಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ಹೀಗಾಗಿ 20ನೇ ವಯಸ್ಸಿನಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು 40, 50 ಅಥವಾ 60ನೇ ವಯಸ್ಸಿನಲ್ಲಿ ಬೇಕಾಗುವ ಪೋಷಕಾಂಶಗಳ ಪ್ರಮಾಣ ಒಂದೇ ಆಗಿರುವುದಿಲ್ಲ.