ಅಮಿತಾಭ್ ಬಚ್ಚನ್ ಅವರ ನಟನೆಯನ್ನು ನಟನಾ ಶಾಲೆಗಳಲ್ಲಿ ಪಠ್ಯವಾಗಿ ಹೇಳಿಕೊಡಲಾಗುತ್ತದೆ. ಭಾರತದ ಅತ್ಯುತ್ತಮ ನಟರಲ್ಲಿ ಬಚ್ಚನ್ ಸಹ ಒಬ್ಬರು. ಮಹಾನ್ ನಟ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರೇ, ತಮಗೆ ದಕ್ಷಿಣದ ನಟರೊಬ್ಬರ ನಟನೆ ಅಚ್ಚುಮೆಚ್ಚು, ತಾವು ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅದೂ ಬಚ್ಚನ್ ಹೊಗಳಿರುವುದು ತಮ್ಮ ಸಮಕಾಲೀನ ನಟರನ್ನಲ್ಲ ಬದಲಿಗೆ ತಮಗಿಂತಲೂ ಕಿರಿಯ ನಟರೊಬ್ಬರನ್ನು. ಅದುವೇ ಧನುಶ್. ಅಮಿತಾಭ್ ಬಚ್ಚನ್, ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟ ಎನಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಅವರು ತಮಗೆ ತಮಿಳಿನ ಸ್ಟಾರ್ ನಟ ಧನುಶ್ ಎಂದರೆ ಬಹಳ ಇಷ್ಟ, ಅವರ ನಟನೆಯ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ.