ಶಿಕ್ಷಣವೆಂದರೆ ಕೇವಲ ಅಂಕ, ಪದವಿ ಪಡೆಯುವುದಲ್ಲ. ಕಲಿಕೆಯ ಪ್ರತಿಯೊಂದು ಹಂತವನ್ನೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ಆ. ವಿಜ್ಞಾನ, ವಾಣಿಜ್ಯ, ಕಲೆ ಸೇರಿದಂತೆ ಎಲ್ಲ ಜ್ಞಾನಶಾಖೆಗಳೂ ಪವಿತ್ರವಾದವು ಎಂದರು.ವಿದ್ಯಾರ್ಥಿಗಳು ನೆಲದ ಮೇಲೆ ಪುಸ್ತಕ, ಪೆನ್ನು ಅಥವಾ ಕಾಗದ ಬಿದ್ದಿರುವುದನ್ನು ಕಂಡರೆ ಕಾಲಿನಿಂದ ತುಳಿಯಬಾರದು. ಬೋಧಿಸುವ ಗುರುಗಳು, ಶಿಕ್ಷಣ ನೀಡುವ ಸಂಸ್ಥೆ ಹಾಗೂ ಕಲಿಕೆಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನಲ್ಲೂ ದೈವ ಸನ್ನಿಧಿ ಇರುತ್ತದೆ ಎಂಬ ಭಾವನೆ ಇರಬೇಕೆಂದರು. ವಿನಯವಂತಿಕೆ ರೂಢಿಸಿಕೊಳ್ಳಿ: ‘ವಿದ್ಯಾ ದದಾತಿ ವಿನಯಂ’ ಎಂಬಂತೆ ನಿಜವಾದ ವಿದ್ಯೆ ಹೊಂದಿರುವ ವ್ಯಕ್ತಿಯಲ್ಲಿ ವಿನಯ ಸಂಪನ್ನನಾಗಿರುತ್ತಾನೆ.