ಬೆಂಗಳೂರು: ಚಿಂದಿ ಆಯುತ್ತಿದ್ದ ವ್ಯಕ್ತಿಯ ಕೈ-ಕಾಲು ಕಟ್ಟಿ ಹಲ್ಲೆ ಮಾಡಿದ್ದಲ್ಲದೆ, ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ ಗಿರಿನಗರದಲ್ಲಿ ನಡೆದಿದೆ.ಪಾದರಾಯನಪುರ ನ. ಗಿರಿನಗರದ 50 ಅಡಿ ರಸ್ತೆಯ ಈರಣ್ಣ ಗುಡ್ಡದಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ ಅಮಾನವೀಯ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದುಷ್ಕರ್ಮಿಗಳು, ಸೈಯದ್ ಕೈ ಕಾಲಿಗೆ ಬೆಂಕಿ ಹಚ್ಚಿದಾಗ ತೀವ್ರ ಕಿರುಚುತ್ತಿದ್ದ. ಬೆಂಕಿಯ ಕೆನ್ನಾಲಿಗೆಗೆ ಹಗ್ಗಗಳು ಹರಿದ ಪರಿಣಾಮ ರಸ್ತೆಗೆ ಓಡಿ ಬಂದಿದ್ದಾನೆ. ಸ್ಥಳೀಯರು, ಬೆಂಕಿ ನಂದಿಸಿ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸೈಯದ್ ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿದ್ದವು.