ಬೇಲೂರು : ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ನವದೆಹಲಿಯ ಉಸ್ತಾದ್ ಬುಸ್ಮಿಲ್ಲಾ ಖಾನ್ ಯುವ ಪುರಸ್ಕಾರ-2022ಕ್ಕೆ ಪುರಸ್ಕೃತರಾದ ಬೇಲೂರಿನ ನಾಟಕಕಾರ, ನಟ, ನಿರ್ದೇಶಕ, ಕವಿ, ಲೇಖಕ ಡಾ.ಬೇಲೂರು ರ. ಶಾಸಕ ಎಚ್.ಕೆ.ಸುರೇಶ್ ಹೇಳಿದರು..ಪಟ್ಟಣದ ಶ್ರೀಚನ್ನಕೆಶವಸ್ವಾಮಿ ದಾಸೋಹ ಭವನದಲ್ಲಿ ಡಾ.ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಡಾ.ಬೇಲೂರು ರಘುನಂದನ್ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು..ಒಬ್ಬ ವ್ಯಕ್ತಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರೆ ಅವರ ಸಾಧನೆ ಕಾರಣ. ಡಾ.ಬೇಲೂರು ರಘುನಂದನ್ ಅವರು ಬೇಲೂರಿನ ಕೀರ್ತಿ ಪತಾಕೆಯನ್ನು ರಾಷ್ಟ್ರದೆಲ್ಲೆಡೆ ಪಸರಿಸಿರುವುದು ಹೆಮ್ಮೆಯ ಸಂಗತಿ.