ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪದಡಿ ವಿವಿಧ ಇಲಾಖೆಗಳ ಒಟ್ಟು 7 ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿ. ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದೆ.ಧಾರವಾಡ, ಬೀದರ್, ಚಿತ್ರದುರ್ಗ, ಬಾಗಲಕೋಟೆ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 31 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸಿದರು.ಷಡಾಕ್ಷರಯ್ಯ, ಚಾಲಕ ಕಂ ನಿರ್ವಾಹಕ, ಡಿಪೋ-1 ಎನ್ಡಬ್ಲೂೃಕೆಎಸ್ಆರ್ಟಿಸಿ, ಹುಬ್ಬಳ್ಳಿ3 ಸ್ಥಳಗಳ ಮೇಲೆ ದಾಳಿ. ಶೋಧನಾ ಸಮಯದ ವೇಳೆ ಸ್ಥಿರಾಸ್ತಿಗಳಾದ ನಿವೇಶನಗಳು, ವಾಸದ ಮನೆ ಪತ್ತೆಯಾಗಿದೆ.