Agnipath 2.0: ಅಗ್ನಿಪಥ್ 2.0 ಯೋಜನೆಯಲ್ಲಿ ಮಹತ್ವದ ಬದಲಾವಣೆ: ಅಗ್ನಿವೀರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ನ್ಯೂಸ್, ಷರತ್ತು ಅನ್ವಯ!. Agnipath 2.0 Centre Announces Major Changes, Big Relief for Agniveers with Conditions Attached! ಕೇಂದ್ರ ಬಿಜೆಪಿ ಸರ್ಕಾರವು ಸೇನೆಯಲ್ಲಿ ಪರಿಚಯಿಸಿರುವ ಅಗ್ನಿಪಥ್ ಯೋಜನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈಚೆಗೆ ಅಗ್ನಿಪಥ್ ಯೋಜನೆಯಲ್ಲಿ ಮಹತ್ವದ ವಿಷಯಗಳು ಚರ್ಚೆ ಆಗುತ್ತಿದ್ದವು. ಇದರ ಬೆನ್ನಲ್ಲೇ ಅಗ್ನಿಪಥ್ 2.0ಯ ಭಾಗವಾಗಿ ಶೇ. 75 ರಷ್ಟು ಅಗ್ನಿವೀರರಿಗೆ ಎರಡು ವರ್ಷಗಳ ವಿಸ್ತರಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ ಶಾಶ್ವತ ಸೇರ್ಪಡೆಗೆ ಕಠಿಣ ಮಾನದಂಡವನ್ನು ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರವು ಹೇಳಿದೆ.