ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಏಕದಿನ ಸರಣಿಗಳನ್ನು ಗೆದ್ದು ಭಾರತ ಕ್ರಿಕೆಟ್ ತಂಡ ಭರ್ಜರಿ ಸಾಧನೆ ಮಾಡಿತ್ತು. ಆದರೆ, ಅಂತಿಮ ಏಕದಿನ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್ಗಳನ್ನು ಪೂರ್ಣಗೊಳಿಸದ ಕಾರಣ ಐಸಿಸಿ ತಂಡಕ್ಕೆ ದಂಡ ವಿಧಿಸಿದೆ. ಈ ನಿಧಾನಗತಿಯ ಓವರ್ರೇಟ್ ಉಲ್ಲಂಘನೆಗಾಗಿ ಭಾರತೀಯ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ.35ರಷ್ಟು ಕಡಿತಗೊಳಿಸಲಾಗಿದ್ದು, ಪ್ರತಿಯೊಬ್ಬ ಆಟಗಾರನಿಗೆ 2.10 ಲಕ್ಷ ರೂ. ನಷ್ಟವಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡ ಟಿ20 ಹಾಗೂ ಏಕದಿನ ಸರಣಿಗಳನ್ನು ಗೆದ್ದು ಭರ್ಜರಿ ಸಾಧನೆ ಮಾಡಿದೆ. ಎರಡೂ ಸರಣಿಗಳಲ್ಲಿ ಟೀಂ ಇಂಡಿಯಾ ಉತ್ತಮ ಆಟ ಪ್ರದರ್ಶಿಸಿ, ನ್ಯೂಜಿಲೆಂಡ್ ತಂಡವನ್ನು ಅದರ ತವರಿನಲ್ಲೇ ಸೋಲಿಸಿತ್ತು.