ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಶಿವಸೇನೆ ರಾಷ್ಟ್ರೀಯ ವಕ್ತಾರೆ ಶೈನಾ ಎನ್ಸಿ ಅಚಾತುರ್ಯದಿಂದ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹರಿದಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಶೈನಾ ಎನ್ಸಿ ಕ್ಷಮೆ ಯಾಚಿಸಿದ್ದಾರೆ. ಯಾರ ಭಾವನೆಗೂ ಧಕ್ಕೆ ತರುವಂತಹ, ಬಾಳಾ ಠಾಕ್ರೆ ಅವರಿಗೆ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ವೀರ ಸಾವರ್ಕರ್ ಕುರಿತಾದ ಉಲ್ಲೇಖಗಳನ್ನು ಖಂಡಿಸಿ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಗದಗಳನ್ನು ಹರಿಯುವಾಗ, ಬಾಳಾಸಾಹೇಬ್ ಠಾಕ್ರೆ ಅವರ ಫೋಟೋ ಇದ್ದ ಕಾಗದವೂ ಅಜಾಗರೂಕತೆಯಿಂದ ಹರಿದುಹೋಗಿತ್ತು.