ಚಿಕ್ಕಮಗಳೂರುಹಾಗೂ ಹಾಸನ ಗಡಿ ಭಾಗದಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು, ಈ ವಾರದಲ್ಲೇ ಹಾಸನದಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದರೆ, ನಿನ್ನೆ(ನವೆಂಬರ್ 18) ಚಿಕ್ಕಮಗಳೂರಿನಲ್ಲೂ ಸಹ ಓರ್ವ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಜನರು ಸಿಡಿದೆದ್ದಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಕಾಡಾನೆಗಳ ಸೆರೆಹಿಡಿಯಲು ಆರಂಭಿಸಿದ್ದ ಕಾರ್ಯಚರಣೆ ಯಶಸ್ವಿಯಾಗಿದೆ. ಹಾಸನ, (ನವೆಂಬರ್ 19): ಹಾಸನ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಜೋಡಿ ಸಲಗಳನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.