ನಾಲ್ಕನೇ ತರಗತಿಯ ಬಳಿಕ ಸಾಮಾನ್ಯ ಶಾಲಾ ಶಿಕ್ಷಣ ತೊರೆದು ತ್ರಿಶೂರ್ನ ಗುರುಕುಲದಲ್ಲಿ ಯಜುರ್ವೇದ ಅಧ್ಯಯನ ಮಾಡಿದ ಕೇರಳದ ಗೋವಿಂದ್ ಕೃಷ್ಣನ್ ಈಗ ಇಸ್ರೋ ವಿಜ್ಞಾನಿಯಾಗಿದ್ದಾರೆ. JEE ಮೇನ್ ಮತ್ತು ಅಡ್ವಾನ್ಸ್ಡ್ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿ IISTಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಅವರ ಅಪರೂಪದ ಶಿಕ್ಷಣ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೊಡ್ಡ ಹುದ್ದೆ ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಕನಸು. ಇದಕ್ಕಾಗಿ ಶಾಲೆ, ಕಾಲೇಜು, ಸ್ಪರ್ಧಾತ್ಮಕ ಪರೀಕ್ಷೆ ಎಂದು ಹಲವು ವರ್ಷಗಳ ಕಾಲ ಶ್ರಮಿಸುತ್ತಾರೆ. ಆದರೆ ಕೇರಳದ ಯುವಕನೊಬ್ಬನ ಶೈಕ್ಷಣಿಕ ಪಯಣ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿದೆ.